ನ್ಯೂಸ್ ನಾಟೌಟ್: ಹಿರಿಯ ರಾಜಕಾರಣಿ, ಸಂಪಾಜೆ ಕಾಂಗ್ರೆಸ್ ನ ಹೃದಯದಂತಿದ್ದ ಮಾಜಿ ಗ್ರಾಮ ಪಂಚಾಯತ್ ಅಧ್ಯಕ್ಷ, ಹಾಲಿ ಗ್ರಾಮ ಪಂಚಾಯತ್ ಸದಸ್ಯ ಜಗದೀಶ್ ರೈ ಕಾಂಗ್ರೆಸ್ ಗೆ ರಾಜೀನಾಮೆ ನೀಡಿದ್ದಾರೆ. ವಲಯ ಅದ್ಯಕ್ಷರು ಕರೆದಂತಹ ಕಾರ್ಯಕರ್ತರ ಸಭೆಗೆ ಮುಂಚಿತವಾಗಿ ಜಗದೀಶ್ ರೈ ರಾಜೀನಾಮೆ ನೀಡಿದ್ದಾರೆ.
ಸಭೆಗೆ ಮೊದಲೇ ರಾಜೀನಾಮೆ ನೀಡಿದ ಕಾರಣ ಅವರು ಕಾರ್ಯಕರ್ತರ ಸಭೆಯನ್ನು ಬಹಿಷ್ಕರಿಸುವುದು ಬಹುತೇಕ ಖಚಿತವಾಗಿದೆ ಎನ್ನಲಾಗಿದೆ. ಕಳೆದ ಕೆಲವು ದಿನಗಳಿಂದ ಕಲ್ಲುಗುಂಡಿ ಕಾಂಗ್ರೆಸ್ ನಲ್ಲಾಗಿರುವ ಆಂತರಿಕ ಭಿನ್ನಮತದಿಂದ ಮನನೊಂದು ಪಕ್ಷಕ್ಕೆ ರಾಜೀನಾಮೆ ನೀಡಿದ್ದಾರೆ ಎನ್ನಲಾಗುತ್ತಿದೆ.