ಸುಳ್ಯ: ಸುಳ್ಯದಲ್ಲಿ ನೂತನ ಕರ್ನಾಟಕ ಕಂಪ್ಯೂಟರ್ ಶಾಖೆ ಉದ್ಘಾಟನೆಗೊಂಡಿದೆ. ಶುಕ್ರವಾರ ಚೆನ್ನಕೇಶವ ದೇವಸ್ಥಾನದ ಸಮೀಪವಿರುವ ಕೇಂದ್ರದಲ್ಲಿ ಆಯುಧ ಪೂಜೆ ಸುಸಂದರ್ಭದಲ್ಲಿ ಪೂಜೆ ನೆರವೇರಿಸುವುದರ ಮೂಲಕ ಹೊಸ ಶಾಖೆಗೆ ಚಾಲನೆ ನೀಡಲಾಯಿತು.
ಈ ಶಾಖೆಯ ಪ್ರಯೋಜನವನ್ನು ಶಾಲಾ-ಕಾಲೇಜು ವಿದ್ಯಾರ್ಥಿಗಳು, ಸರಕಾರಿ-ಖಾಸಗಿ ನೌಕರರು, ಸಾರ್ವಜನಿಕರು ಪಡೆದುಕೊಳ್ಳಬೇಕೆಂದು ಸಂಸ್ಥೆಯ ನಿರ್ದೇಶಕರಾಗಿರುವ ಕಿಶೋರ್ ಕುಮಾರ್ ಕೆ. ಮನವಿ ಮಾಡಿಕೊಂಡಿದ್ದಾರೆ. ಇದೇ ಸಂಸ್ಥೆಯ ಶಾಖೆ ಸಂಪಾಜೆಯ ಕಲ್ಲುಗುಂಡಿಯಲ್ಲೂ ಕಾರ್ಯ ನಿರ್ವಹಿಸುತ್ತಿದೆ.