ಕ್ರೈಂ

ಬಿಸಿ ನೀರು ಬಿದ್ದು 2 ವರ್ಷದ ಮಗು ಸಾವು, ವಿಧಿ ನೀನೆಷ್ಟು ಕ್ರೂರಿ..!

697

ಮೈಸೂರು: ಇಲ್ಲಿನ ಜಯಪುರ ಹೋಬಳಿಯ ದಾಸನಕೊಪ್ಪಲು ನಿವಾಸಿ ರಾಮು ಅವರ 2 ವರ್ಷದ ಹೆಣ್ಣು ಮಗು ಆದ್ಯಾ ಬಿಸಿನೀರನ್ನು ಮೈಮೇಲೆ ಚೆಲ್ಲಿಕೊಂಡು ಭಾನುವಾರ ಸಂಜೆ ಮೃತಪಟ್ಟಿದೆ.

ಬೆಳಗ್ಗೆ ತಾಯಿಯು ಬಿಸಿನೀರಿನ ಪಾತ್ರೆಯನ್ನು ಸ್ನಾನದ ಮನೆಯಲ್ಲಿರಿಸಿ, ತಣ್ಣೀರು ತರಲು ಹೊರಗಡೆ ಹೋಗಿದ್ದಾಗ ಮನೆಯ ಹಾಲ್ ನಲ್ಲಿದ್ದ ಮಗು ಅಲ್ಲಿಗೆ ಹೋಗಿ ಪಾತ್ರೆಯಲ್ಲಿದ್ದ ನೀರನ್ನು ಚೆಲ್ಲಿಕೊಂಡಿತ್ತು. ತೀವ್ರ ಸುಟ್ಟಗಾಯಗಳಿಂದ ಬಳಲುತ್ತಿದ್ದ ಮಗುವನ್ನು ಕೆ.ಆರ್.ಆಸ್ಪತ್ರೆಗೆ ದಾಖಲಿಸಲಾಗಿತ್ತು. ಚಿಕಿತ್ಸೆಗೆ ಸ್ಪಂದಿಸದೇ ಮೃತಪಟ್ಟಿತು ಎಂದು ಪೊಲೀಸರು ತಿಳಿಸಿದ್ದಾರೆ. ಜಯಪುರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

See also  ಡಿಕೆಶಿ 9 ವರ್ಷದ ಬಾಲಕಿಯನ್ನು ಅಪಹರಿಸಿ ಆಸ್ತಿ ಬರೆಸಿದ್ದಾನೆ ಎಂದ ದೊಡ್ಡ ಗೌಡರು..! ಏನಿದು ಆರೋಪ..?
  Ad Widget   Ad Widget   Ad Widget   Ad Widget   Ad Widget   Ad Widget   Ad Widget