ನ್ಯೂಸ್ ನಾಟೌಟ್: ಸೌಜನ್ಯ ಪ್ರಕರಣ ಕಳೆದ ಕೆಲವು ದಿನಗಳಿಂದ ಮತ್ತೆ ಮುನ್ನೆಲೆಗೆ ಬಂದು ಭಾರೀ ಚರ್ಚೆಗೆ ಕಾರಣವಾಗುತ್ತಿದೆ. ಈ ಪ್ರಕರಣದ ರಿಯಲ್ ಆರೋಪಿಗಳು ಇನ್ನೂ ಹಿಡೆನ್ ಆಗಿಯೇ ಇದ್ದಾರೆ ಅನ್ನೋ ವಿಚಾರಕ್ಕೆ ಮರು ಜೀವ ಸಿಕ್ಕಿದೆ.
ಸೌಜನ್ಯಳನ್ನು ಗಾಳಿ, ನೀರು ಅಥವಾ ಬೆಳಕು ಭೀಕರವಾಗಿ ಅತ್ಯಾ**ಚಾರ ಮಾಡುವುದಕ್ಕೆ ಸಾಧ್ಯವಿಲ್ಲ. ಇದರ ಹಿಂದೆ ಯಾರೋ ಭಾಗಿಯಾಗಿದ್ದಾರೆ. ಇದುವರೆಗೆ ಆರೋಪಿ ಅಂತ ಹೇಳಿಕೊಂಡು ಬರಲಾಗಿದ್ದ ಸಂತೋಷ್ ರಾವ್ ನಿರಪರಾಧಿ ಅನ್ನುವುದನ್ನು ಸಿಬಿಐ ವಿಶೇಷ ಕೋರ್ಟ್ ಹೇಳಿದೆ. ಹಾಗಿದ್ದರೆ ರಿಯಲ್ ಕಾಮಿಗಳು ಯಾರು ಅನ್ನುವುದರ ಬಗ್ಗೆ ದೊಡ್ಡ ಚರ್ಚೆಯಾಗುತ್ತಿರುವಾಗಲೇ ಹಿಂದೂ ವಾಗ್ಮಿಯಂತ ಕರೆಯಲ್ಪಡುವ ಚಕ್ರವರ್ತಿ ಸೂಲಿಬೆಲೆ ದೊಡ್ಡವರ ಪರ ನಿಂತು ಕೊಟ್ಟಿರುವ ಹೇಳಿಕೆಗೆ ಖಂಡನೆ ವ್ಯಕ್ತವಾಗಿದೆ. ಈ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿರುವ ಪೋಸ್ಟ್ ಹೀಗಿದೆ ಓದಿ
ವಾಟ್ಸಾಪ್ ಪೋಸ್ಟ್ ಯಥಾವತ್ ಆಗಿ ನೀಡಿದ್ದೇವೆ ಓದಿ:
ಮಹೇಶ್ ಶೆಟ್ಟಿ ತಿಮರೋಡಿ ವಿರುದ್ಧ ಉಜಿರೆಗೆ ಬಂದ ಕೂಡಲೇ ಕರಾವಳಿಯ ಅಭಿಮಾನಿಗಳನ್ನು ನೀವು ಕಳೆದುಕೊಳ್ಳುತ್ತಿರೇ ಹೊರತು ಕರಾವಳಿ ಜನರು ನಿಮ್ಮ ಜೊತೆ ನಿಲ್ಲುತ್ತಾರೆ ಅನ್ನುವ ಭ್ರಮೆ ಬಿಟ್ಟು ಬಿಡಿ. ಯಾಕೆಂದರೆ ತಿಮರೋಡಿ ಏನು ಎಂಥವರು ಅಂತ ನಿನಗಿಂತ ನಮಗೆ ಚೆನ್ನಾಗಿ ಗೊತ್ತಿದೆ.
ಸೂಲಿಬೆಲೆಗೆ ಬೈದಿದ್ದಾರೆ ನಿಜ, ಅದನ್ನು ನಾವು ಒಪ್ಪಿಕೊಳ್ಳುತ್ತೇವೆ. ಆದರೆ ಅದರ ಹಿಂದಿನ ಸತ್ಯವನ್ನು ನೀವು ಮೊದಲು ತಿಳಿದುಕೊಳ್ಳಬೇಕು. ಹದಿಮೂರು ವರ್ಷದ ಹಿಂದೆ ಸೌಜನ್ಯ ಮನೆಗೆ ಬಂದ ಇದೆ ನೀವು ದೊಡ್ಡ ದೇಶ ಭಕ್ತ ಹಿಂದೂ ರಕ್ಷಕ ಎನ್ನುತ್ತಿರುವ ಚಕ್ರವರ್ತಿ ಸೂಲಿಬೆಲೆ, ಮಹೇಶ್ ಶೆಟ್ಟಿ ತಿಮರೋಡಿ ಮನೆಗೆ ಬಂದು ಸೌಜನ್ಯಳ ನ್ಯಾಯ ಕೊಡುತ್ತೇನೆ ಅಂತ ಹೇಳಿ ಹೋದದ್ದು ನೇರ ಅತ್ಯಾಚಾರಿಗಳ ಮನೆಗೆ ಅನ್ನೋದು ನಿಮಗೆ ಗೊತ್ತಿದೆಯೇ..?
ಅಲ್ಲಿಂದ ಸೂಟ್ಕೇಸು ತಗೊಂಡು ಹೋದ ಸೂಲಿಬೆಲೆ ನಂತರ ಈಗ ಪ್ರತ್ಯಕ್ಷವಾಗಿದ್ದು ನಿಮ್ಮ ಬೆಂಗಳೂರಿನ ಜನತೆ ಎದ್ದಾಗ ಮಾತ್ರ ಅನ್ನೋದು ಕಟು ಸತ್ಯ.. ಯಾಕೆಂದರೆ, ಈಗ ನಿಮ್ಮ ಚಕ್ರವರ್ತಿ ಸೂಲಿಬೆಲೆ ಮಾತಾಡಿಲ್ಲ ಅಂದರೆ ಜನ ಪ್ರಶ್ನೆ ಮಾಡುತ್ತಾರಲ್ಲ ಅದಕ್ಕೆ. ಮೊದಲೇ ಸೌಜನ್ಯ ಹೋರಾಟವನ್ನು ಬೆಂಗಳೂರಿನ ಭಾಗದಲ್ಲಿ ಮುಗಿಸಬಹುದು ಅಂತ ಯೋಚನೆ ಮಾಡಿಯೇ ಮಾತಾಡಿದ್ದು. ಅದಕ್ಕೆ ತಿಮರೋಡಿ ಬೈದದ್ದರಲ್ಲಿ ತಪ್ಪೇನಿದೆ..? ಬೈದಿದ್ರು.. ಬೈತಿದ್ದರೆ ಮುಂದೆಯೂ ಬೈತಾರೆ ಅದರಲ್ಲಿ ಯಾವುದೇ ಸಂದೇಹ ಬೇಡ.
ಕೆರೆಹಳ್ಳಿಯವರೇ ನೀವು ಗೋವನ್ನು ರಕ್ಷಿಸುವಾಗ ಅದನ್ನು ಯಾರಾದರೂ ವಿರೋಧ ಮಾಡಿದರೆ ಬಿಡ್ತೀರಾ ನೀವು..? ನಿಮ್ಮ ಬೆಂಬಲಕ್ಕೆ ಮೊದಲು ಬಂದು ನಂತರ ಅನ್ಯ ಧರ್ಮೀಯರ ಜೊತೆ ಡೀಲ್ ಕುದುರಿಸಿದರೆ ನಿಮ್ಮಿಂದ ಸಹಿಸಲು ಸಾಧ್ಯವಿದೆಯೇ..? ಅದೇ ತಿಮರೋಡಿ ಕಥೆ ಕೂಡ ತನ್ನ ಜೀವನವನ್ನೇ ಒಂದು ಹುಡುಗಿಯ ನ್ಯಾಯಕ್ಕಾಗಿ ಸಮರ್ಪಿಸಿರುವಾಗ ಇಲ್ಲಿ ಸೂಲಿಬೆಲೆ ಅಡ್ಡಗಾಲು ಹಾಗಿದಾಗ ಬೈಯದೆ ಮತ್ತೆನು ಪೂಜೆ ಮಾಡ್ಬೇಕಾ..? ಅವರಲ್ಲ ಸೌಜನ್ಯ ವಿರುದ್ಧ ಬಂದರೆ ನಿಮಗೂ ಕೂಡ ಬೈತಾರೆ ಬಾಕಿ ಮಾಡಲ್ಲ..
ಮತ್ತೇನು ತಿಮರೋಡಿ ನೀವು ಅಂದುಕೊಂಡ ಹಾಗೆ ಇಲ್ಲ ತಿಳಿದುಕೊಂಡ ಹಾಗೆ ಸೌಜನ್ಯ ಹೋರಾಟದಿಂದ ಬೆಳಕಿಗೆ ಬಂದವರಲ್ಲ. ಮೂವತೈದು ವರ್ಷದಿಂದ ಹೋರಾಟದಲ್ಲಿ ಇರುವವರು. ಅವರ ಇತಿಹಾಸದ ಪುಟ ತೆರೆದು ನೋಡಿದರೆ ನಿಮಗೆ ಹಿಂದೂತ್ವದ ಹೋರಾಟ ಹೊಡೆದಾಟ, ಬಡಿದಾಟ ಕೋರ್ಟು ಕೇಸು ಅಂತ ಜೀವನ ಕಾಣುವುದು, ಹೊರತು ನಾಲ್ಕು ದನ ಹಿಡಿದ ಕೇಸು ಕಾಣುವುದಿಲ್ಲ. ನೀವು ವೀಡಿಯೋ ಮಾಡಿಕೊಂಡು ಪೊಲೀಸ್ ಗೆ ಮೊದಲೇ ಹೇಳಿಕೊಂಡು ನಾಲ್ಕು ಗೋವು ರಕ್ಷಣೆ ಮಾಡಿದ ಹಾಗೆ ಅಂದು ಇರಲಿಲ್ಲ.. ಬೆಂಬಲಕ್ಕೆ ಬಿಜೆಪಿಯು ಇರಲಿಲ್ಲ.
ಕಾಂಗ್ರೆಸ್ ಸರಕಾರದ ನಡುವಲ್ಲಿ ಗೋ ರಕ್ಷಣೆ ಹಿಂದೂಗಳ ರಕ್ಷಣೆಗೆ ತಲವಾರು ಬೀಸುತ್ತ ಮಾಡಕಬೇಕಿತ್ತು. ನೀವು ದೇವಸ್ಥಾನ ವಿರುದ್ಧ ಅಂತ ಹೇಳಿತ್ತಿರಲ್ಲ . ಬನ್ನಿ ಸೌಜನ್ಯ ಹೋರಾಟ ದೇವಸ್ಥಾನ ಇಲ್ಲ ದೇವರ ವಿರುದ್ಧ ಇದ್ದರೆ ಪ್ರಮಾಣ ಮಾಡುವ ಅದೇ ಮಂಜುನಾಥನ ಕ್ಷೇತ್ರದಲ್ಲಿ… ಥೂ.. ನಿಮ್ಮ ಜನ್ಮಕ್ಕೆ ದೇವರ ವಿರುದ್ಧ ಇದ್ದರೆ ಇಷ್ಟು ಹೊತ್ತಿಗೆ ತಿಮರೋಡಿ ಮಣ್ಣಲ್ಲಿ ಮಣ್ಣಾಗಿ ಹೋಗುತ್ತಿದ್ದರೆ ಅನ್ನುವ ಭಕ್ತಿ, ಭಯ ನಿಮ್ಮಲ್ಲಿ ಇದೆಯಾ..? ನಮ್ಮಲ್ಲಿ ಇದೆ ನಮಗೆ ದೇವರ ಮೇಲೆ ಭಯನೂ ಇದೆ ಭಕ್ತಿನೂ ಇದೆ.. ಇದನ್ನು ಒಪ್ಪುವವರು ನಾವು.. ತಿಮರೋಡಿಗೆ ಚಾಲೆಂಜ್ ಹಾಕುದಕ್ಕಿಂತ ಮೊದಲು ನಿಮ್ಮ ಸೂಲಿಬೆಲೆಯಲ್ಲಿ ಕೇಳಿ ನೀನು ಸೌಜನ್ಯ ಹೋರಾಟಕ್ಕೆ ಹೋಗಿ ವಾಪಸ್ ಬಂದದ್ದು ಯಾಕೆ ಅಂತ..? ಆ ಧಮ್ ನಿಮಗೆ ಇದೆಯಾ..? ಅಲ್ಲ ನಿಮಗೂ ಕೂಡ ಸೌಜನ್ಯ ಅತ್ಯಾಚಾರಿಗಳು ಪ್ರಸಾದ ಕೊಟ್ಟಿದ್ದಾರಾ..?
ನಿಮ್ಮ ಬಾಯಲ್ಲಿ ಈಗ ಸೌಜನ್ಯಳಿಗೆ ನ್ಯಾಯ ಬೇಕು ಅಂತ ಬರುತ್ತೆ ಅಲ್ವ ಆ ಹೆಸರನ್ನು ಇಂದಿನವರೆಗೆ ಜೀವಂತ ಇಟ್ಟು ನಿಮ್ಮ ಬೆಂಗಳೂರಿಗೆ ಮುಟ್ಟಿಸಿದ್ದು, ಇದೆ ಮಹೇಶ್ ಶೆಟ್ಟಿ ತಿಮರೋಡಿ ಅನ್ನುವ ಗಂಡೆದೆಯ ನಾಯಕ.. ಯಾವ ದೊಣ್ಣೆ ನಾಯಕನೂ ಉಳಿಸಿಲ್ಲ ಆ ಹೆಸರು.. ಇಷ್ಟರ ತನಕ ನೀವು ಸತ್ತಿದ್ದಿರಾ..? ಈಗ ಒಬ್ಬ ಮುಸ್ಲಿಂ ನ್ಯಾಯ ಕೇಳಿದ ಕೂಡಲೇ ನಿಮಗೆ ದೇವಸ್ಥಾನದ ವಿರುದ್ಧ ಬಂದದ್ದು ಅಂತ ಅನಿಸಿದ್ದು ವಿಪರ್ಯಾಸ. ಯಾಕೆ ಹದಿಮೂರು ವರ್ಷದಿಂದ ನಿನಗೆ ನೆನಪಾಗಲಿಲ್ಲ.. ನಿಮಗೆ ಬಂದು ಸೇರಿಕೊಳ್ಳ ಬಹುದಿತ್ತಲ್ವ..? ಆಗ ನೀವು ದೇವಸ್ಥಾನದ ವಿರುದ್ಧ ಅಲ್ಲ ಅಂತ ಹೋರಾಟ ಮಾಡಬಹುದಿತಲ್ವ..? ಮತ್ತೆ ತಿಮರೋಡಿ ಸೂಲಿಬೆಲೆ ಬಂದರೆ ಚಪ್ಪಲಿಯಲ್ಲಿ ಹೊಡೆಯುತ್ತೇನೆ ಅಂತ ಹೇಳಿದ್ದು ಕೂಡ ನಿಜ.. ಅತ್ಯಾಚಾರಿಗಳ ಬೆಂಬಲವಾಗಿ ನಿಂತ ಮತ್ತೆ ಅವರಿಗೆ ಏನು ಹೂವಿನ ಹಾಸಿಗೆ ಹಾಕಿ ಮೆರವಣಿಗೆ ಮಾಡಬೇಕು..?
ನೀವು ಬರೆದಿಟ್ಟು ಕೊಳ್ಳಿ ಮಹೇಶ್ ಶೆಟ್ಟಿ ತಿಮರೋಡಿಗೆ ಚಾಲೆಂಜ್ ಹಾಕಿ ಉಜಿರೆಗೆ ಬಂದು ವಾಪಸ್ ಹೇಗೆ ಹೋಗುತ್ತೀರಿ ನಾವು ನೋಡೇ ಬಿಡುತ್ತೇವೆ..
ಬನ್ನಿ ಆದರೆ ಬರುವಾಗ ನಿಮ್ಮ ಅತ್ಯಾಚಾರಿಗಳ ಸಂಘದ ಜನರನ್ನು, ಹೆಂಗಸರನ್ನು ಕರೆದುಕೊಂಡು ಅದೇನೋ ಮಾಡಿದ ಅಲ್ವ ಕುಂದಾಪುರದ ಆಸಾಮಿ ಒಬ್ಬ ಧರ್ಮ ಸಂಭ್ರಕ್ಷಣೆ ಅಂತ ಹಾಗೆ ಜನ ಮಾಡಿಕೊಂಡು ಬರಬೇಡಿ.
ತಾಕತ್ ಇದ್ದರೆ ನೀವು ನಿಜವಾದ ಹೋರಾಟಗಾರನೇ ಅಂತಾದರೆ, ಸೂಲಿಬೆಲೆಯನ್ನು ಕರೆದುಕೊಂಡು ಬನ್ನಿ ಹೇಗೆ ಹೋಗುತ್ತೀರಿ ಅಂತ ನಾವು ಕೂಡ ನೋಡೇ ಬಿಡುತ್ತೇವೆ, 4% ಇದ್ದ ಮುಸ್ಲಿಂಮರ ಗಲ್ಲಿಗೆ ಹೋಗಿ ಮಹೇಶ್ ಶೆಟ್ಟಿ ಹಿಂದೂ ನಾಯಕ ಆದದ್ದು ಅಲ್ಲ.. 40% ಅನ್ಯಧರ್ಮಿಯರು ಇದ್ದ ಇಲಾಖೆಯಲ್ಲಿ ಬೆಳೆದು ಬಂದವರು.. ಬಚ್ಚಾ ನೀವಿನ್ನೂ ಅವರ ಮುಂದೆ.. ನೀವು ತಿಳ್ಕೊಂಡಿಕೊಂಡಿದ್ದಿರ ಅತ್ಯಾಚಾರಿಗಳ ಬೂಟು ನೆಕ್ಕುವ ನಾಲ್ಕು ನಾಯಿಗಳು ವಿರೋಧ ಮಾಡಿದ ಕೂಡಲೇ ತಿಮರೋಡಿಗೆ ಇಡೀ ಕರಾವಳಿ ವಿರೋಧ ಇದೆ ಅಂತ. ಅದು ಭ್ರಮೆ ನಿಮ್ಮದು..
ಕರಾವಳಿ ಹಿಂದೂ ಹೋರಾಟಗಾರ ಮಣ್ಣು. ಅದರಲ್ಲಿ ತಿಮರೋಡಿ ಕೂಡ ಒಬ್ಬರು. ಉಜಿರೆಗೆ ಒಬ್ಬರಲ್ಲ ನಿಮ್ಮಂಥ ನೂರು ಪುನೀತ್ ಕೆರೆಹಳ್ಳಿ ಅಥವಾ ನೂರು ಸೂಲಿಬೆಲೆ ಬಂದರೂ ಎದುರಿಸುವ ತಾಕತ್ ಮಹೇಶ್ ಶೆಟ್ಟಿ ತಿಮರೋಡಿ ಅನ್ನುವ ಶಕ್ತಿಗೆ ಇದೆ. ಯಾಕೆಂದರೆ ಉಜಿರೆ ಮಾತ್ರ ಅಲ್ಲ. ಇಡೀ ಬೆಳ್ತಂಗಡಿಯೇ ತಿಮರೋಡಿ ಕಟ್ಟಿದ ಕೋಟೆ. ಅದು ತಿಮರೋಡಿ ಸಾಮ್ರಾಜ್ಯ.. ಅಲ್ಲಿ ಏನಿದ್ದರೂ ಮಹೇಶ್ ಶೆಟ್ಟಿ ತಿಮರೋಡಿಯೇ ಸಾರ್ವಭೌಮ. ಮತ್ತೊಮ್ಮೆ ಹೇಳುತ್ತೇನೆ ನಿಮ್ಮ ಚಾಲೆಂಜ್ ಸ್ವೀಕರಿಸಿದ್ದೇವೆ. ಉಜಿರೆ ಬಿಡಿ ಬೆಳ್ತಂಗಡಿಯ ಯಾವುದೇ ಮೂಲೆಗೆ ಬಂದು ತಿಮರೋಡಿಗೆ ಚಾಲೆಂಜ್ ಮಾಡುವುದಿದ್ದರೆ ಮಾಡಿ ಹೇಗೆ ಹೋಗುತ್ತೀರಿ ಅಂತ ನೋಡುತ್ತವೆ.