Latest

ಹಿಂದೂ ಯುವತಿ ಮದ್ವೆಯಾಗಲು ಮುಸ್ಲಿಂ ಯುವಕ ಯತ್ನ;ಲವ್ ಜೀಹಾದ್ ಗೆ ನಕಲಿ ವಿಳಾಸ ಬಳಕೆ-ಪೊಲೀಸ್‌ ದೂರು

1.3k
Spread the love

ನ್ಯೂಸ್‌ ನಾಟೌಟ್: ಹಿಂದೂ ಯುವತಿಯನ್ನು ಮದುವೆಯಾಗಲು ಮುಸ್ಲಿಂ ಯುವಕ ಯತ್ನಿಸಿರುವ ಘಟನೆ ಮೈಸೂರಿನ ಚಾಮರಾಜ ಕ್ಷೇತ್ರದ ಮಡಿವಾಳ ಬೀದಿಯಲ್ಲಿ ಬೆಳಕಿಗೆ ಬಂದಿದೆ.ಈತ ಯಾರದ್ದೋ ಮನೆಯ ವಿಳಾಸವನ್ನು ತನ್ನ ಮನೆಯ ವಿಳಾಸ ಅಂತ ಸಬ್‌ ರಿಜಿಸ್ಟ್ರಾರ್ ಕಚೇರಿಗೆ ಕೊಟ್ಟು ಮದುವೆಯಾಗಲು ಯತ್ನಿಸಿದ್ದಾನೆ.ಸಲ್ಮಾನ್ ಎಂಬ ಯುವಕ ಮೈಸೂರಿನ ಮಡಿವಾಳ ಬೀದಿಯ ಮನೆ ನಂ. 130 ರಲ್ಲಿ ವಾಸವಿದ್ದೇನೆ ಎಂದು ಸಬ್ ರಿಜಿಸ್ಟ್ರಾರ್‌ಗೆ ಸಲ್ಲಿಕೆ ಮಾಡಿದ್ದ ಎಂದು ಹೇಳಲಾಗಿದೆ.

ಈತ ಹಿಂದೂ ಯುವತಿಯ ಜೊತೆ ಮದುವೆಯಾಗಲು ಸಬ್ ರಿಜಿಸ್ಟ್ರಾರ್‌ ಕಚೇರಿಗೆ ಅರ್ಜಿ ಸಲ್ಲಿಸಿದ್ದಾನೆ. ಆದರೆ ಅಸಲಿಗೆ ಸಲ್ಮಾನ್ ಈ ಮನೆಯಲ್ಲಿ ಬಾಡಿಗೆ ಇಲ್ಲ. ಅಲ್ಲದೇ ಈ ಯುವಕ ಯಾರು ಅಂತನೂ ಮನೆಯ ಮಾಲೀಕನಿಗೆ ಗೊತ್ತಿಲ್ಲ. ಈ ವಿಚಾರ ಗೊತ್ತಾಗಿ ಸಬ್ ರಿಜಿಸ್ಟ್ರಾರ್‌ಗೆ ಮನೆಯ ಮಾಲೀಕ ರವೀಂದ್ರ ದೂರು ನೀಡಿದ್ದಾರೆ. ಸಲ್ಮಾನ್ ಯಾರು ಅಂತಲೇ ಗೊತ್ತಿಲ್ಲ. ನಮ್ಮ ಮನೆಯ ವಿಳಾಸವನ್ನ ದುರುಪಯೋಗ ಪಡಿಸಿಕೊಂಡಿದ್ದಾನೆ. ನಾನು ಯಾವ ಕುಟುಂಬಕ್ಕೂ ಮನೆ ಬಾಡಿಗೆ ಕೊಟ್ಟಿಲ್ಲ. ಒಂದು ಪಕ್ಷದ ಕಚೇರಿಗೆ ಮಾತ್ರ ಬಾಡಿಗೆ ಕೊಟ್ಟಿದ್ದೇನೆ. ನನಗೆ ನನ್ನ ಮನೆಯ ವಿಳಾಸ ಬಳಸಿರುವ ಸಲ್ಮಾನ್‌ ಯಾರು ಎಂಬುದೇ ಗೊತ್ತಿಲ್ಲ. ನನಗೆ ವಾಟ್ಸಪ್ ಮೂಲಕ ಮಾಹಿತಿ ಬಂತು. ಕೂಡಲೇ ನಾನು ಸಬ್ ರಿಜಿಸ್ಟ್ರಾರ್‌ಗೆ ದೂರು ಕೊಟ್ಟಿದ್ದೇನೆ ಅಂತ ಮನೆಯ ಮಾಲೀಕ ಎಂ.ರವೀಂದ್ರ ಹೇಳಿದ್ದಾರೆ.ಅಲ್ಲದೇ ಈ ವಿವಾಹ ನೋಂದಣಿಯನ್ನ ವಜಾಮಾಡಿ ಕ್ರಮ ಕೈಗೊಳ್ಳಿ ಎಂದು ದೂರಿನಲ್ಲಿ ಒತ್ತಾಯಿಸಿದ್ದಾರೆ. 

See also  ಹೆಂಡತಿಗೆ ಪ್ರೇಮಿಯ ಜೊತೆ ಮದುವೆ ಮಾಡಿಸಿದ ಆಕೆಯ ಗಂಡ..! ಇಬ್ಬರು ಮಕ್ಕಳನ್ನು ತನ್ನೊಂದಿಗೆ ಇರಿಸಿಕೊಂಡ ವ್ಯಕ್ತಿಯ ವಿಡಿಯೋ ವೈರಲ್..!
  Ad Widget   Ad Widget   Ad Widget   Ad Widget   Ad Widget   Ad Widget