Uncategorized

ಯೋಧ ಹಾಗೂ ಆತನ ಕುಟುಂಬದ ಮೇಲಿನ ಹಲ್ಲೆ ಪ್ರಕರಣ, ಶುಂಠಿಕೊಪ್ಪದ ಮೂವರು ಆರೋಪಿಗಳ ಬಂಧನ

ಮಡಿಕೇರಿ: ಕೊಡಗಿನಲ್ಲಿ ವೀರ ಯೋಧನ ಕುಟುಂಬದ ಮೇಲೆ ಹಲ್ಲೆ ನಡೆಸಿದ ಪ್ರಕರಣಕ್ಕೆ ಸಂಬಂಧಪಟ್ಟಂತೆ ಪೊಲೀಸರು ಮೂವರನ್ನು ಬಂಧಿಸಿದ್ದಾರೆ. ಸೆರೆಯಾದವರನ್ನು ರಫೀಕ್ ಖಾನ್‌, ಇಸಾಕ್ ಖಾನ್‌ ಹಾಗೂ ನಾಸಿರ್ ಎಂದು ಗುರುತಿಸಲಾಗಿದೆ. ಇಸಾಕ್ ಕೊಡಗು ಜಿಲ್ಲಾ ಜೆಡಿಎಸ್ ಅಲ್ಪಸಂಖ್ಯಾತ ಘಟಕದ ಅಧ್ಯಕ್ಷ ಎಂದು ಹೇಳಲಾಗಿದೆ. ಬಂಧಿತರೆಲ್ಲರು ಶುಂಠಿಕೊಪ್ಪ ನಿವಾಸಿಗಳಾಗಿದ್ದಾರೆ. ಮಡಿಕೇರಿ ಗ್ರಾಮಾಂತರ ಠಾಣಾ ಪೊಲೀಸರು ಕ್ಷಿಪ್ರ ಕಾರ್ಯಾಚರಣೆ ನಡೆಸಿ ಆರೋಪಿಗಳನ್ನು ಬಂಧಿಸಿದ್ದಾರೆ. ಸೋಮವಾರ ಯೋಧ ಅಶೋಕ್‌ ಕುಮಾರ್‌ ಕಾರಿನಲ್ಲಿ ಪ್ರಯಾಣಿಸುತ್ತಿದ್ದಾಗ ಹಿಂದಿನಿಂದ ಬಂದ ಕಾರೊಂದು ಡಿಕ್ಕಿಯಾಗಿತ್ತು. ಈ ವೇಳೆ ಮಾತಿನ ಚಕಮಕಿ ನಡೆದು ಒಂದು ಕೋಮಿನ ಮಂದಿ ಗುಂಪುಗಟ್ಟಿ ಯೋಧ ಅಶೋಕ್‌ ಹಾಗೂ ಕುಟುಂಬದ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿದ್ದರು. ಕಾರ್ಗಿಲ್ ವಿಜಯ ದಿವಸದಂದೇ ಈ ಘಟನೆ ನಡೆದು ಹೋಗಿತ್ತು. ಆರೋಪಿಗಳ ಬಂಧನಕ್ಕೆ ಕೊಡಗಿನಾದ್ಯಂತ ಒತ್ತಾಯ ಕೇಳಿ ಬಂದಿತ್ತು.

Related posts

ಮಹಿಳಾ ಪ್ರಯಾಣಿಕೆಗೆ ಗುಪ್ತಾಂಗ ತೋರಿಸಿ ವಿಕೃತಿ ಮೆರೆದ ಕ್ಯಾಬ್ ಚಾಲಕ..! ಅರ್ಧ ರಾತ್ರಿಯಲ್ಲಿ ಮಹಿಳೆ ಕಿರುಚಿಕೊಂಡು ಓಡಿದ್ದೆಲ್ಲಿಗೆ?

ತಾಯಿ ಶಾರದೆಗೆ ಶಿರಭಾಗಿ ನಮಿಸಿದ ಉದ್ಯೋಗದಾತ ವಿದ್ಯಾಮಾತಾ ಅಕಾಡೆಮಿ, ಹೇಗಿತ್ತು 7ನೇ ವರ್ಷದ ಶಾರದೋತ್ಸವ..?

ಡಿಕೆ ಸುರೇಶ್ ಎಳೆದಾಡಿ ಬಸ್‌ ಗೆ ತುಂಬಿದ ಪೊಲೀಸರು..!