ಸುಳ್ಯ

ಕೇಂದ್ರದ ಯೋಜನೆಗಳು ಜನಸಾಮಾನ್ಯರಿಗೆ ಸರಿಯಾಗಿ ತಲುಪಿವೆ: ಹರೀಶ್ ಕಂಜಿಪಿಲಿ

983

ಸುಳ್ಯ: ಕೇಂದ್ರದ ಯೋಜನೆಗಳು ಇಂದಿನ ದಿನಗಳಲ್ಲಿ ಜನಸಾಮಾನ್ಯರಿಗೆ  ಸರಿಯಾಗಿ ತಲುಪುತ್ತಿದೆ. ಯೋಜನೆಗಳ ಸರಿಯಾದ ಮಾಹಿತಿಯನ್ನು  ಕಾರ್ಯಕರ್ತರು ಜನರಿಗೆ ತಲುಪಿಸುವ ಕಾರ್ಯವನ್ನು ಮಾಡಬೇಕಿದೆ ಎಂದು ಬಿಜೆಪಿ ಮಂಡಲ ಸಮಿತಿ ಅಧ್ಯಕ್ಷ ಹರೀಶ್ ಕಂಜಿಪಿಲಿ ತಿಳಿಸಿದರು. ಸುಳ್ಯ ಸಿ.ಎ ಬ್ಯಾಂಕ್ ಹಾಲ್ ನಲ್ಲಿ ನಡೆದ ಹಿಂದುಳಿದ ವರ್ಗಗಳ ಮೋರ್ಚಾದ ಕಾರ್ಯಕಾರಿಣಿ ಸಭೆಯನ್ನು ಉದ್ದೇಶಿಸಿ ಅವರು ಮಾತನಾಡಿದರು. ಪಂಚಾಯತ್ ನಿಂದ ಪಾರ್ಲಿಮೆಂಟ್ ವರೆಗೆ ಈಗ ಬಿಜೆಪಿ ಸರಕಾರವೇ ಇದೆ. ಇದರ ಹಿಂದೆ ಅನೇಕ ಹಿರಿಯರ ತ್ಯಾಗ ಬಲಿದಾನವಿದೆ ಎಂದರು. ತಾಲೂಕು ಹಿಂದುಳಿದ ಮೋರ್ಚಾ ಅಧ್ಯಕ್ಷ ಚಂದ್ರಶೇಖರ ಪನ್ನೆ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಈ ಸಂದರ್ಭ ಪ್ರಮುಖರಾದ ರಾಕೇಶ್ ರೈ ಕೆಡೆಂಜಿ, ಆರ್.ಟಿ. ನಾರಾಯಣ, ಉದಯಕುಮಾರ್ ಮೊದಲಾದವರಿದ್ದರು. ನವೀನ್ ಸಾರಕೆರೆ ಸ್ವಾಗತಿಸಿ ಚಂದ್ರಶೇಖರ ಕೇರ್ಪಳ ನಿರೂಪಿಸಿದರು.

See also  ಆಲೆಟ್ಟಿ: ಚಾಲಕನ ನಿಯಂತ್ರಣ ತಪ್ಪಿ ಕಾರು ಪಲ್ಟಿ, ಇಬ್ಬರಿಗೆ ಗಾಯ, ಆಸ್ಪತ್ರೆಗೆ ದಾಖಲು
  Ad Widget   Ad Widget   Ad Widget   Ad Widget   Ad Widget   Ad Widget   Ad Widget